About astrology   image
ಭೈಷಜ ಜೋತಿಷ ಅಥವಾ ವೈದ್ಯಕೀಯ ಜೋತಿಷ ಎಂಬುದು ಒಂದು ಮಹಾದೈವಜ್ಞ ಪ್ರಕರಣ. ಭಚಕ್ರದ ರಾಶಿಗಳೂ ನಕ್ಷತ್ರಗಳೂ ಬದುಕಿನ ರೀತಿಗಳ ಮೇಲೂ ಆರೋಗ್ಯ,
ದೇಹಪ್ರಕೃತಿದೈಹಿಕ ಕ್ರಿಯೆಗಳೇ ಮುಂತಾದವುಗಳ ಮೇಲು ಹೇಗೆ ತಮ್ಮ ಪ್ರಭಾವ ಬೀರುತ್ತವೆ ಎಂಬುದನ್ನು ಕುರಿತ ಜೋತಿಷ ವಿಭಾಗ.
ವಾಸ್ತವವಾಗಿ ವೈದ್ಯಕೀಯ ಶಾಸ್ತ್ರವು ಜೋತಿಷದ ವಿಭಾಗವೆ.ಇದು ಪ್ರತ್ಯಕ್ಷವಾಗಿ ಸ್ಪಷ್ಟಪಡುವ ಅಂಶವಾಗಿದೆ.
ಅಂತರಿಕ್ಷದಲ್ಲಿ ಏರ್ಪಡುವ ಗ್ರಹಗಳ ಕೆಲವು ಕೋನಿಕ ಸ್ಥಿತಿಗತಿಗಳು ಶಕ್ತಿಗಳನ್ನು ಅಥವಾ ಚೈತನ್ಯಗಳನ್ನು ಹೊರಸೂಸುತ್ತದೆ.
ಇವು ವ್ಯಕ್ತಿಗಳ ಚೈತನ್ಯಗಳಿಗೆ ಸರಿ ಹೊಂದದೆ ಹೋದರೆ ಆವ್ಯಕ್ತಿಯ ದೈಹಿಕ ಮಾನಸಿಕ ಅವಸ್ಥೆಗಳಲ್ಲಿ ಪಲ್ಲಟ ವುಂಟುಮಾಡುತ್ತದೆ.
ಗ್ರಹಗಳ ಈ ಕೆಟ್ಟ ಪ್ರಭಾವಗಳನ್ನು ನಿವಾರಿಸಲು ನಮ್ಮ ಪ್ರಾಚೀನರು ಕೆಲವು ಪರಿಹಾರಗಳನ್ನು ಮನಗಂಡಿದ್ದರು,ಹೀಗೆ ವೈದ್ಯಕೀಯ ವಿಜ್ಞಾನವು ಕ್ರಮೇಣ ಬೆಳೆಯಿತು.
ಭಚಕ್ರದ ಪ್ರತಿಯೊಂದು ಭಾಗವು ಮನುಷ್ಯ ದೇಹದ ಒಂದು ಭಾಗವನ್ನೂ ಆ ಭಾಗಕ್ಕೆ ವಿಶಿಷ್ಟವಾದ ಕಾಯಿಲೆಗಳನ್ನು ಪ್ರತಿನಿದಿಸುತ್ತದೆ.ಪ್ರತಿ ಗ್ರಹವು ವಿಶಿಷ್ಟವಾದ ಕಾಯಿಲೆಗಳನ್ನೂ ಸೂಚಿಸುತ್ತದೆ.ರೋಗ ಗ್ರಹವು ವಿಶಿಷ್ಟವಾದ ಕಾಯಿಲೆಗಳನ್ನು ಸೂಚಿಸುತ್ತದೆ.ರೋಗ ತೋಲನಗಳಲ್ಲಿ ಆಗುವ ಪರಿಣಾಮಗಳು. ಈ ಪಲ್ಲಟಗಳುಂಟಾಗುವ ವೇಳೆಗಳಾವುವು ಎಂಬುದನ್ನು ಮುನ್ನುಡಿಯಲು ಸಾದ್ಯ ಮತ್ತು ಈ ಕೆಟ್ಟ ಪ್ರಭಾವಗಳನ್ನು ತಡೆಯಲೋ ತಗ್ಗಿಸಿ ಕೊಳ್ಳಲೋ ಯುಕ್ತವಾದಷ್ಟು ಪರಿಹಾರ ಗಳನ್ನು ಒದಗಿಸಿಕೊಳ್ಳಲೂ ಶಕ್ಯ.
ಜನನಕಾಲದ ಗ್ರಹ ಸ್ಥಿತಿಗಳು ಆಯಾ ವ್ಯಕ್ತಿಯ ನರಳುವ ಕಾಯಿಲೆ ಗಳು ಯಾವುವು,ಹೇಗೆ ನಮ್ಮನ್ನು ಕಾಡುತ್ತವೆ.ಅವನ್ನು ಶಮನಪಡಿಸಿಕೊಳ್ಳುವ ಉತ್ತಮೋಪಾಯಗಳು.
ಇವು ಯಾವುವು ಎಂಬುದನ್ನು ತಿಳಿಸುತ್ತವೆ.
Contact
No 9242777971

I BUILT MY SITE FOR FREE USING