ದೃಷ್ಟಿ ಫಲ:ಮೇಷ ವೃಶ್ಚಿಕ ದಲ್ಲಿರುವ ರವಿಗೆಚಂದ್ರನ ದೃಷ್ಟಿಯಿದ್ದರೆ:ದಾನಿ,ಬಹುಜನ ಕೆಲಸಗಾರರು, ಸುಂದರವಾದ ಶೃಂಗಾರ ಉಳ್ಳ ಯುವತಿ. ಜನರ ಕಣ್ಮಣಿ. ಮೃದು ಶರೀರ.
ಕುಜನ ದೃಷ್ಟಿ ಇದ್ದರೆ, ಯುದ್ಧದಲ್ಲಿ ಆಸಕ್ತಿ.ಅತಿ ವೀರ ,ಕ್ರೂರಿ ,ಕಣ್ಣು ,ಹಸ್ತ ಪಾದ ಇವೆಲ್ಲ ಕೆಂಪಾಗಿರುತ್ತವೆ.ತೇಜಸ್ವಿ.
ಗುರು ದೃಷ್ಟಿ ಇದ್ದರೆ ಬಹು ದ್ರವ್ಯ ಸಂಪನ್ನ.ದಾನಿ.ಅರಸನ ಮಂತ್ರಿ.ಅಥವಾ ಸೇನಾನಾಯಕ.ಶ್ರೇಷ್ಠ ಮಾನವ.
ಶನಿ ದೃಷ್ಟಿ ಇದ್ದರೆ; ದುಃಖತಪ್ತ ಶರೀರ.ಯದ್ವಾತದ್ವಾ ವರ್ತಿಸುವವನು.ಮೂರ್ಖ .ವೃಷಭ ತುಲಾ ರವಿಗೆ ಇತರ ಗ್ರಹಗಳ ದೃಷ್ಟಿ ಪಲ:
ಚಂದ್ರ ದೃಷ್ಟಿಯಿದ್ದರೆ ವೇಶ್ಯಾ ಸಂಸರ್ಗ. ಮೃದು ಮಾತುಗಾರ. ಬಹುಯುವತಿಯರಆಶ್ರಯದಾತ.ನೀರಿನ ವೃತ್ತಿಯಿಂದ ಜೀವಿಸುತ್ತಾನೆ.
ಕುಜ ದೃಷ್ಟಿಯಿದ್ದರೆ ಶೂರತೇಜೋವಂತ.ಸಾಹಸ ಪ್ರವೃತ್ತಿ .ಧನಕೀರ್ತಿ ಪಡೆವಾತ. ಆದರೆ ಅಂಗವಿಕಲ.
ಗುರು ದೃಷ್ಟಿ ಇದ್ದರೆ ಸಮಾನವಾದ ಶತ್ರುಗಳು ಮತ್ತು ಮಿತ್ರರು ಇರುವಾತ.ರಾಜಕಾರಣಿ .
ಶನಿ ದೃಷ್ಟಿ ಇದ್ದರೆ ನಿಚನು ಆಲಸ್ಯ ಉಳ್ಳವ.ಧನಹೀನ. ವೃದ್ಧ ಹೆಂಗಸರಲ್ಲಿ ರಮಿಸುತ್ತಾನೆ.ಸದಾ ರೋಗಿಷ್ಟ .
ಮಿಥುನ ಕನ್ಯಾ ದಲ್ಲಿ ರವಿ ಇದ್ದು ಚಂದ್ರನ ದೃಷ್ಟಿ ಇದ್ದರೆ ಶತ್ರುಗಳಿಂದ ಬಂಧುಗಳಿಂದ ಪೀಡೆ.ವಿದೇಶ ಗಮನ ಚಿಂತಕ.ಬಹಳ ತೊಂದರೆ ಶೋಕ ಪಡುತ್ತಿರುತ್ತಾರೆ.
ಕುಜ ದೃಷ್ಟಿ ಇದ್ದರೆ ಶತ್ರುಭಯ ಕಲಹ ಯುದ್ಧದಲ್ಲಿ ಅಪವಾದ ಕೇಳುವಾತ.ದುಃಖಿಸುತ್ತಾರೆ.ನಾಚಿಕೆ ಸ್ವಭಾವ.
ಗುರು ದೃಷ್ಟಿ ಇದ್ದರೆ ಬಹು ಶಾಸ್ತ್ರ ಪಾಠ ಪ್ರವಚನಗೈವಾತ. ರಾಜರ ರಾಯ ಬಾರಿ.ವಿದೇಶವಾಸಿ. ಕೋಪಿಷ್ಠ.ರೋಗಿಯಾಗುತ್ತಾನೆ.
ಶನಿದೃಷ್ಠಿ ಇದ್ದರೆ . ಬಹುಸಂಖ್ಯೆಯ ಕೆಲಸಗಾರರು. ಉದ್ವೇಗ.ಬಹುಮಂದಿ ಬಂಧುಗಳು ಅವರನ್ನು ಪೋಷಣೆಮಾಡುತ್ತಾನೆ ಆದರೆ ಕಪಟಿ,
ಕಟಕ ರಾಶಿ ಯಲ್ಲಿರುವ ರವಿಗೆ ಚಂದ್ರ ದೃಷ್ಟಿ ಇದ್ದರೆ ರಾಜನೋ ರಾಜ ಸಮಾನ ನೋಆಗುತ್ತಾನೆ.
ನೀರಿನ ಪದಾರ್ಥಗಳ ವ್ಯಾಪಾರಿ ಧನಿಕ, ಸ್ಥಿರ ಬುದ್ಧಿಯುಳ್ಳವನು.ಕ್ರೂರ ಸ್ವಭಾವ.
ಕುಜ ದೃಷ್ಟಿ ಇದ್ದರೆ ಬಾವು ರೋಗ ಗಳಿಂದ ಬಳಲುತ್ತಾನೆ.ಬಂಧುಗಳಲ್ಲಿ ವಿರಸ.ಸಂತಾನಹೀನ.
ಗುರು ದೃಷ್ಟಿಯಿದ್ದರೆ ಶ್ರೇಷ್ಠ ಮಾನವ ಮಂತ್ರಿ ಅಥವಾ ಸೇನಾನಾಯಕ ಮಹಾ ಪ್ರಸಿದ್ಧನು ನೈಪುಣ್ಯಉಳ್ಳವನು.
ಶನಿ ದೃಷ್ಟಿಯಿದ್ದರೆ ಕಫ ವಾಯು ರೋಗ ಗಳಿಂದ ಬಳಲುವಾಗ ಪರರ ಸ್ವತ್ತನ್ನು ಅಪಹರಿಸುತ್ತಾನೆ.ವಕ್ರಬುದ್ಧಿ . ದುಷ್ಟ.ಚಾಡಿಕೋರ .
ಸಿಂಹ ರವಿಗೆ ಚಂದ್ರನ ದೃಷ್ಟಿ ಇದ್ದರೆ ,ಬುದ್ಧಿ ಧಾರಣ ಶಕ್ತಿ ಉಳ್ಳವನು. ಒಳ್ಳೆಯ ಹೆಂಡತಿ. ಕಫ ಪೀಡಿತ .ರಾಜರಿಗೆ ಒಡೆಯ.
ಕುಜ ದೃಷ್ಟಿ ಇದ್ದರೆ ಅನ್ಯರ ಹೆಂಡತಿಯಲ್ಲಿ ಆಸಕ್ತ.ಪರಾಕ್ರಮಿ.ಸಾಹಸಿಗ ಸದಾ ಉದ್ಯೋಗ ಶೀಲ ಕೋಪ ಜಾಸ್ತಿ.ಸಮಾಜದಲ್ಲಿ ಪ್ರಧಾನ ಪುರುಷ.
ಗುರು ದೃಷ್ಟಿ ಇದ್ದರೆ ದೇವಾಲಯ ಉಪವನ ವಿಹಾರ ಸ್ಥಳ ಸರೋವರ ರಚಿಸುತ್ತಾನೆ.ಮಹಾ ಬಲಿಷ್ಠ.ಜನರಲ್ಲಿ ಬೆರೆಯುತ್ತಾನೆ.ಮಹಾ ಬುದ್ಧಿವಂತ.
ಶನಿ ದೃಷ್ಟಿ ಇದ್ದರೆ ಅನ್ಯರ ಕಾರ್ಯಗಳನ್ನು ತಡೆಯೊಡ್ಡಿ ನಾಸ ಮಾಡುವುದರಲ್ಲಿ ದಕ್ಷ.ನಪುಂಸಕ.ಪರೋಪದ್ರವಕಾರಿ.
ಧನು ಮೀನಾ ರವಿಗೆ ಇತರ ಗ್ರಹ ದೃಷ್ಟಿ:
ಚಂದ್ರನ ದೃಷ್ಟಿ ಇದ್ದರೆವಾಕ್ಚಾತುರ್ಯ.ಬುದ್ಧಿವಂತ.ಮಹಾ ಸಂಪನ್ನ.ಪುತ್ರ ವಂತ.ವೈಭವ ಜೀವನ ನಡೆಸುವ ರಾಜ ಸಮಾನನು ದುಃಖ ರಹಿತ ಸುಪುಷ್ಟ ಸುಂದರ ಶರೀರ.
ಕುಜ ದೃಷ್ಟಿ ಇದ್ದರೆ ಯುದ್ಧದಲ್ಲಿ ಜಯಕೀರ್ತಿ ಗಳಿಸುವಾತ,ಸ್ಪಷ್ಟ ಮಾತುಗಾರ.ಧನ ಸುಖಾದಿ ಸಂಪನ್ನ.ಕೋಪಿಷ್ಟ.
ಗುರು ದೃಷ್ಟಿ ಇದ್ದರೆ ಅರಮನೆಯಲ್ಲಿ ಪ್ರಭಾವಿ ವ್ಯಕ್ತಿ.ವಾಹನಗಳ ಒಡೆಯ.ವಿದ್ಯಾ ಸಂಪನ್ನ.
ಶನಿ ದೃಷ್ಟಿ ಇದ್ದರೆ ಅಪವಿತ್ರವಾದ ಕೋಳಕನು.ಪರರ ಅನ್ನವನ್ನು ಅಪೇಕ್ಷಿಸುವನು.ಈಚೆ ಜನರ ಸಹವಾಸ.ಪ್ರಾಣಿಗಳಲ್ಲಿ ಕ್ರೀಡೆ ಸುತ್ತಾನೆ.
ಮಕರ ಕುಂಭ ರವಿಗೆ ಇತರ ಗ್ರಹಗಳ ದೃಷ್ಟಿ.
ಚಂದ್ರ ದೃಷ್ಟಿ ಇದ್ದರೆ ಇಂದ್ರಜಾಲ ಮಾಯ ಜಾಲ ವಿದ್ಯಾ ಪಟು.ಚಂಚಲ ಬುದ್ಧಿ . ವಿವಿಧಸ್ತ್ರೀಯರ ಸಂಗ .ಧನ ಆರೋಗ್ಯ ಹಾನಿ.
ಕುಜ ದೃಷ್ಟಿ ಇದ್ದರೆ ರೋಗಶತ್ರು ಪೀಡಿತ ಅನ್ಯ ರೊಡನೆ ಕಲಹ .ಶಸ್ತ್ರಗಳಿಂದ ಗಾಯ. ಅಂಗ ಹೀನ.
ಗುರು ದೃಷ್ಟಿ ಇದ್ದರೆ ಶುಭ ಕಾರ್ಯಕರ್ತರು ಬುದ್ಧಿವಂತರು ಸರ್ವರಿಗೂ ಆಶ್ರಯದಾತ ಬಹಳ ಕೀರ್ತಿವಂತ ಸಂತೋಷ.
ಶನಿ ದೃಷ್ಟಿ ಇದ್ದರೆ ಶತ್ರುತ್ವವನ್ನು ಗೊಳಿಸುತ್ತಾರೆ.ರಾಜಕಾರಣಿಗಳಿಂದ ಸನ್ಮಾನ ಕೊಳ್ಳುತ್ತಾರೆ ವಿಶೇಷ ಧೈರ್ಯ.

I BUILT MY SITE FOR FREE USING