ಜಾತಕ ಒಂದಾಣಿಕೆಗೆಶುಭ-ಅಶುಭ ಯೋಗಗಳು:
೧ ಒಂದೇ ರಾಶಿ ಅಥವಾ ಲಗ್ನ ಒಂದೇ ವಧು ವರರ ಜಾತಕದಲ್ಲಿ ಇದ್ದರೆ ಶುಭ.
೨ ಲಗ್ನವು ಮತ್ತೊಬ್ಬರ ಸಪ್ತಮ ಸ್ಥಾನ ವಾಗಿದ್ದರೆ ಶುಭ.
೩ ಒಂದು ಜಾತಕದಲ್ಲಿ ಶುಕ್ರ ಸ್ಥಿತರಾದ ರಾಶಿಯಲ್ಲಿಮತ್ತೊಬ್ಬರ ಜಾತಕದಲ್ಲಿ ಚಂದ್ರ ಸ್ಥಿತರಾದರೆ ಶುಭ.
೪ ಲಗ್ನಾಧಿಪತಿ ಮತ್ತೊಬ್ಬರ ಲಗ್ನದಲ್ಲಿದ್ದರೆ ಶುಭ.
೫ ಲಗ್ನದಲ್ಲಿರುವ ಗ್ರಹಗಳು ಮತ್ತೊಬ್ಬರ ಜಾತಕದ ಸಪ್ತಮದಲ್ಲಿದ್ದರೆ ಶುಭ.
೬ ಎರಡು ಜಾತಕಗಳಲ್ಲಿ ಗ್ರಹಗಳಿಗೆ ಶುಭ ದೃಷ್ಟಿ ಇದ್ದರೆ ಶುಭ
೭ ಗುರು ಒಂದು ಜಾತಕದಲ್ಲಿ ಸ್ಥಿತ ಸ್ಥಾನದಿಂದ ಮತ್ತೊಬ್ಬರ ಜಾತಕದಲ್ಲಿ 3-1-2 ಅಥವಾ 11 ರಲ್ಲಿದ್ದರೆಶುಭ.
೮ ಸಪ್ತಮದಲ್ಲಿ ಉಚ್ಚ ಗುರುವಿದ್ದರೆ ಪತಿ-ಪತ್ನಿಯರು ಧರ್ಮನಿಷ್ಠೆ ಉಳ್ಳವರು.
೯ ಸಪ್ತಮದಲ್ಲಿ ಶನಿ ಇದ್ದರೆಬಾಲಾಡ್ಯರಾಗಿದ್ದರೆ ಪತಿ-ಪತ್ನಿಯರು ಧಾರ್ಮಿಕರು ತತ್ವಜ್ಞಾನದಲ್ಲಿ ಆಸಕ್ತಿ ಮಿತಭಾಷಿಗಳು.
೧೦ ಸಪ್ತಮದಲ್ಲಿ ಬಲಾಡ್ಯ ರವಿ ಇದ್ದರೆ ಪತಿ-ಪತ್ನಿಯರು ಶ್ರೀಮಂತರು ಅಧಿಕಾರ ವರ್ಗದವರು ರಾಜಕಾರಣಿಗಳು ಆಗಿರುತ್ತಾರೆ.
೧೧ ಕುಜನು ತುಲಾ ರಾಶಿಯಲ್ಲಿ ಇದ್ದರೆ ಸ್ತ್ರಿ ದೊರಕುತ್ತಾಳೆ ಮತ್ತು ಅವಳಿಂದ ಅನೇಕ ತೊಂದರೆಗಳು ಬರುತ್ತವೆ.
೧೨ ವಧು ವರರ ಒಬ್ಬರ ಜಾತಕದಲ್ಲಿ ಮಾತ್ರ ಲಗ್ನ ಸಪ್ತಮದಲ್ಲಿ ರವಿ ಕುಜ ಶನಿ ರಾಹು ಗಳು ಇದ್ದುಇನ್ನೊಬ್ಬರ ಜಾತಕದಲ್ಲಿ ಇರದಿದ್ದರೆ ಅಶುಭದಾಯಕ.
೧೩ ಶನಿಯು ಸಪ್ತಮದಲ್ಲಿದ್ದರೆ ದಾಂಪತ್ಯ ತೊಂದರೆ ವಿವಾಹ ನಿಧಾನ ಅಥವಾ ಇಳಿವಯಸ್ಸಿನಲ್ಲಿ ಗುಪ್ತ ಸಂಬಂಧ ಹೊಂದುತ್ತಾನೆ ಅಥವಾ ಪುನರ್ವಿವಾಹ ಯೋಗ.
೧೪ ದ್ವಿತೀಯಾಧಿಪತಿ ಸಪ್ತಮದಲ್ಲಿದ್ದರೆ ವಿವಾಹದ ನಂತರ ಲಾಭ ಆದಾಯ ಕಳಿಸುತ್ತಾರೆ.ಪತ್ನಿ ಅಲ್ಲದೆ ಇತರ ಸ್ತ್ರೀಯನ್ನು ಹೊಂದುತ್ತಾರೆ.
೧೫ ತೃತೀಯಾಧಿಪತಿ ಶುಭ ಗ್ರಹವಾಗಿ ಸಪ್ತಮದಲ್ಲಿದ್ದರೆ ಜಾತಕರ ಪತ್ನಿಯು ಸುಂದರ ಭವಿಷ್ಯ ಉಳ್ಳವಳು. ಅಶುಭ ಗ್ರಹ ಸಪ್ತಮದಲ್ಲಿದ್ದರೆ ಪತ್ನಿಯು ನೀತಿ ಗೆಡುತಾಳೆ .ಗುಪ್ತ ಸಂಬಂಧ ಹೊಂದಿರುತ್ತಾಳೆ.

I BUILT MY SITE FOR FREE USING