~~~ಜೇನುತುಪ್ಪ-ಔಡಲ ಎಣ್ಣೆ- ಲಿಂಬೆ ರಸ.~~~ ***************************** ಒಳ್ಳೆಯ ಆರೋಗ್ಯ ಭಾಗ್ಯವನ್ನು ಆಪೇಕ್ಷಿಸು ವವರು ಆರೋಗ್ಯ ಪ್ರಜ್ಞೆಯುಳ್ಳವರೂ ಸಂಯಮಿಗಳುಮಿತಾಹಾರಿಗಳು ಆಗಿರುವುದು ಅವಶ್ಯವಾಗಿರುವುದು.
ಮುಖ್ಯವಾಗಿ ಆರೋಗ್ಯ ಸರಿಯಾಗಿರಬೇಕಾದರೆ , ಮಲಬದ್ಧತೆ ಎಷ್ಟು ಮಾತ್ರಕ್ಕೂ ಇರಬಾರದು. ಇರದಂತೆ ನೋಡಿಕೊಳ್ಳಬೇಕು. ಅನುಕೂಲಕರವಾದಆಹಾರ, ವಿಹಾರ ರೂಢಿಸಿಕೊಳ್ಳಬೇಕು.
ಬೆಳಿಗ್ಗೆ ಒಂದು ಚಮಚ ಜೇನು ತುಪ್ಪ , ಒಂದು ಚಮಚ ಔಡಲ ಎಣ್ಣೆ , ಒಂದು ಚಮಚ ಲಿಂಬೆ ರಸ ಮಿಶ್ರಣ ಮಾಡಿ ತೆಗೆದುಕೊಳ್ಳಬೇಕು. ಮೇಲೊಂದು ಗ್ಲಾಸ್ ಉಗುರು ಬೆಚ್ಚಗಿನ ನೀರು ಕುಡಿಯಬೇಕು.
ಮುಂಜಾನೆ ವಾಯು ವಿಹಾರದ ನಂತರ ಪ್ರಾತಃ ವಿಧಿ ಮುಗಿಸಿ ಒಂದು ಕಪ್ ಹವೀಜ ಕಾಡೆ ( ಕೊತ್ತಂಬರಿ ಬೀಜದ ಕಷಾಯ) ಕುಡಿದರೆ ಮಲಬದ್ಧತೆ ನಿವಾರಣೆ ಆಗುತ್ತದೆ. ದೇಹದಲ್ಲಿ ಲವಲವಿಕೆ ಇರುತ್ತದೆ.
ಹೀಗೆ ವಾರದಲ್ಲಿ ಮೂರು ಅಥವಾ ನಾಲ್ಕು ಬಾರಿ ಜೇನುತುಪ್ಪ , ಔಡಲ ಎಣ್ಣೆ , ಲಿಂಬೆ ರಸ ಬೆರೆಸಿ ತೆಗೆದುಕೊಳ್ಳುವುದರಿಂದ ಮಲಬದ್ಧತೆ ಇಲ್ಲದೆ ಆರೋಗ್ಯವಂತರಾಗಿರಬಹುದು. S.H.Nadaf.