ದ್ವಾದಶ ಭಾವದಲ್ಲಿ ರವಿ ಇದ್ದರೆ ಸಾಮಾನ್ಯವಾಗಿ ಕಿ ಎತ್ತವರಿಂದಹೆಚ್ಚು ಸಹಕಾರ ಸಿಗದೇ ಆತಂಕಕ್ಕೆ ಗುರಿ ಆಗುತ್ತಾರೆ.ಕಣ್ಣಿನ ತೊಂದರೆ ಕಾಡುತ್ತದೆ.
ಚಂದ್ರನಿದ್ದರೆ ಎಷ್ಟು ಸಂಪಾದಿಸುವ ಅಷ್ಟೇ ಕರ್ಚು.
ಕುಜನಿದ್ದರೆ ಸಂಪಾದನೆಗಿಂತ ಹೆಚ್ಚು ಖರ್ಚು ಸಹೋದರರ ಸಹಾಯವಿಲ್ಲ.ಸ್ನೇಹಿತರಿಗೆ ಇವರು ಸಹಾಯ ಮಾಡುವರು ಆದರೆ ಅವರಿಂದ ಇವರಿಗೆ ಯಾವುದೇ ಸಹಾಯವಿಲ್ಲ.
ಬುಧನಿದ್ದರೆ ಬಾಲ್ಯಾವಸ್ಥೆಯಲ್ಲಿ ಕಷ್ಟಪಡ ಬೇಕಾಗುವುದು.ಯಾವುದೇ ರೀತಿಯಲ್ಲಿ ಧನ ಸಂಪಾದಿಸಿದರು ಅದೇ ಹೇಳ್ತಿ ಖರ್ಚು ಆಗುತ್ತದೆ.
ಗುರು ಇದ್ದರೆ ಪ್ರಮಾಣಿಕ ಸದ್ಗುಣಿ ,ಧನವಂತ, ನಾದರೂ ಉದಾರ ಮನೋಭಾವ ,ಖರ್ಚು ಹೆಚ್ಚಾಗುತ್ತದೆ ,ನಿಸ್ವಾರ್ಥ ಸೇವೆ ,
ಶುಕ್ರನಿದ್ದರೆ ಅದು ಸ್ವಕ್ಷೇತ್ರ ವಾಗಿದ್ದರೆ ಅಥವಾ ಉಚ್ಚ ಕ್ಷೇತ್ರವಾಗಿದ್ದರೆ ಅಂತವರು ಪ್ರಸಿದ್ಧ ವ್ಯಾಪಾರಿಗಳು, ಇಲ್ಲವೇ ರಾಜಕಾರಣಿ, ಮಂತ್ರಿಯಾಗುತ್ತಾರೆ, ಇವರಿಗೆ ಜೀವನದ ಎಲ್ಲಾ ಭಾಗ್ಯಗಳುಲಭಿಸುತ್ತವೆ. ಪತಿವ್ರತೆಯಾದ ಹೆಂಡತಿ ದೊರೆಯುತ್ತಾಳೆ .ಇವರು ಕವಿಗಳು ,ವಿದ್ವಾಂಸರು.
ಶನಿ ಇದ್ದರೆ ,ಸಾಧಾರಣ ಕುಟುಂಬದಲ್ಲಿ ಹುಟ್ಟಿದರೂ ಸಾಧಾರಣ ವಿದ್ಯೆ ದೊರೆತು ಅಸಾಧಾರಣ ವ್ಯಕ್ತಿಯಾಗುತ್ತಾರೆ. ಜೀವನದಲ್ಲಿ ಏರಿಳಿತಗಳು ಹೆಚ್ಚಾಗುತ್ತದೆ .ಧನಿಕರು. ಕುಟುಂಬದಲ್ಲಿ ಸಾಮರಸ್ಯವಿರುವುದಿಲ್ಲ.ನೀಚ ಜನರ ಸಹವಾಸ ಇರುತ್ತದೆ.
ರಾಹು ಇದ್ದರೆ ಹಣಕಾಸಿನ ತೊಂದರೆ ಇರುವುದಿಲ್ಲ. ಆದರೆ ಉತ್ಪತ್ತಿ ಅಷ್ಟೇ ಕರ್ಚು. ಆಗಾಗ ತೊಂದರೆಗೆ ಸಿಲುಕುತ್ತಾರೆ. ಸ್ವಪ್ರಯತ್ನದಿಂದ ಮುಂದೆ ಬರುತ್ತಾರೆ.
ಕೇತು ವಿದ್ದರೆ ಯಶಸ್ವಿ ರಾಜನೀತಿಜ್ಞಆಗುತ್ತಾರೆ.ನಾಲ್ಕನೇ ಭಾವದಲ್ಲಿ ಗುರುವಿದ್ದು ದ್ವಾದಶದಲ್ಲಿ ಕೇತು ಇದ್ದರೆ ಜೀವನ್ ಮುಕ್ತಿ ದೊರೆಯುತ್ತದೆ.